2 ಪೂರ್ವಕಾಲವೃತ್ತಾ 4 : 1 (KNV)
ಇದಲ್ಲದೆ ಅವನು ತಾಮ್ರದ ಬಲಿಪೀಠ ವನ್ನು ಮಾಡಿದನು. ಅದರ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಹತ್ತು ಮೊಳ.
2 ಪೂರ್ವಕಾಲವೃತ್ತಾ 4 : 2 (KNV)
ಅವನು ಎರಕದ ಸಮುದ್ರವನ್ನು ಮಾಡಿಸಿದನು; ಅದು ಸುತ್ತಲಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳ, ಅದರ ಎತ್ತರ ಐದು ಮೊಳ, ಸುತ್ತಳತೆ ಮೂವತ್ತು ಮೊಳ ನೂಲಳತೆಯಾಗಿತ್ತು.
2 ಪೂರ್ವಕಾಲವೃತ್ತಾ 4 : 3 (KNV)
ಅದರ ಕೆಳಭಾಗದಲ್ಲಿ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯ ಲ್ಪಟ್ಟಿದ್ದವು.
2 ಪೂರ್ವಕಾಲವೃತ್ತಾ 4 : 4 (KNV)
ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡು ತ್ತಿದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು,
2 ಪೂರ್ವಕಾಲವೃತ್ತಾ 4 : 5 (KNV)
ಅವುಗಳ ಹಿಂಭಾಗಗಳೆಲ್ಲಾ ಒಳಗಾಗಿದ್ದವು. ಅದರ ದಪ್ಪವು ನಾಲ್ಕು ಬೆರಳಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು; ಅದು ಮೂರು ಸಾವಿರ ಕೊಳಗ ಹಿಡಿಯುವದಾಗಿತ್ತು.
2 ಪೂರ್ವಕಾಲವೃತ್ತಾ 4 : 6 (KNV)
ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ ಅವುಗಳಲ್ಲಿ ದಹನಬಲಿಗೋಸ್ಕರ ಅರ್ಪಿಸು ವವುಗಳನ್ನು ತೊಳೆಯುವ ನಿಮಿತ್ತವಾಗಿ ಬಲಪಾರ್ಶ್ವ ದಲ್ಲಿ ಐದನ್ನೂ ಎಡಪಾರ್ಶ್ವದಲ್ಲಿ ಐದನ್ನೂ ಇರಿಸಿ ದನು. ಆದರೆ ಆ ಸಮುದ್ರವು ಯಾಜಕರಿಗೋಸ್ಕರ ತೊಳೆಯುವದಕ್ಕೆ ಇತ್ತು.
2 ಪೂರ್ವಕಾಲವೃತ್ತಾ 4 : 7 (KNV)
ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.
2 ಪೂರ್ವಕಾಲವೃತ್ತಾ 4 : 8 (KNV)
ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
2 ಪೂರ್ವಕಾಲವೃತ್ತಾ 4 : 9 (KNV)
ಇದ ಲ್ಲದೆ ಅವನು ಯಾಜಕರ ಅಂಗಳವನ್ನೂ ದೊಡ್ಡ ಅಂಗಳವನ್ನೂ ಅಂಗಳಗಳಿಗೋಸ್ಕರ ಬಾಗಲುಗಳನ್ನೂ ಮಾಡಿಸಿ
2 ಪೂರ್ವಕಾಲವೃತ್ತಾ 4 : 10 (KNV)
ಸಮುದ್ರವನ್ನು ತಾಮ್ರದಿಂದ ಹೊದಿಸಿ ದನು. ಸಮುದ್ರವನ್ನು ಪೂರ್ವ ಭಾಗದ ಬಲ ಪಾರ್ಶ್ವ ದಲ್ಲಿ ದಕ್ಷಿಣಕ್ಕೆ ಎದುರಾಗಿ ಇರಿಸಿದನು.
2 ಪೂರ್ವಕಾಲವೃತ್ತಾ 4 : 11 (KNV)
ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾ ಮನು ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊ ಮೋನನಿಗೆ ಮಾಡಬೇಕಾದ ಕಾರ್ಯವನ್ನು ಮಾಡಿ ತೀರಿಸಿದನು.
2 ಪೂರ್ವಕಾಲವೃತ್ತಾ 4 : 12 (KNV)
ಎರಡು ಸ್ತಂಭಗಳನ್ನೂ ಎರಡು ಸ್ತಂಭ ಗಳ ಮೇಲಿರುವ ಬೋದಿಗೆಗಳನ್ನೂ ಬೋದಿಗೆಗಳ ಮೇಲೆ ಮುಚ್ಚುವ ಎರಡು ಜಾಲರು ಹಣಿತೆಗಳನ್ನೂ
2 ಪೂರ್ವಕಾಲವೃತ್ತಾ 4 : 13 (KNV)
ಕಂಬಗಳ ಮೇಲಿರುವ ಎರಡು ಬೋದಿಗೆಗಳನ್ನೂ ಮುಚ್ಚತಕ್ಕದ್ದಾದ ಒಂದೊಂದು ಜಾಲರು ಹೆಣಿತಕ್ಕೆ ಎರಡು ಸಾಲು ದಾಳಿಂಬರ ಕಾಯಿಗಳನ್ನೂ ಜಾಲರು ಹಣಿತೆಗಳಿಗೆ ನಾನೂರು ದಾಳಿಂಬರ ಕಾಯಿಗಳನ್ನೂ ಮಾಡಿದನು.
2 ಪೂರ್ವಕಾಲವೃತ್ತಾ 4 : 14 (KNV)
ಇದಲ್ಲದೆ ಅವನು ಆಧಾರಗಳನ್ನೂ ಅದರ ಮೇಲೆ ಇರುವ ತೊಟ್ಟಿಗಳನ್ನೂ ಮಾಡಿದನು.
2 ಪೂರ್ವಕಾಲವೃತ್ತಾ 4 : 15 (KNV)
ಒಂದು ಸಮುದ್ರವನ್ನೂ ಅದರ ಕೆಳಗೆ ಇರುವ ಹನ್ನೆರಡು ಎತ್ತುಗಳನ್ನೂ ಪಾತ್ರೆಗಳನ್ನೂ ಸಲಿಕೆಗಳನ್ನೂ ಕೊಂಡಿಗಳನ್ನೂ
2 ಪೂರ್ವಕಾಲವೃತ್ತಾ 4 : 16 (KNV)
ಅವುಗಳ ಎಲ್ಲಾ ಸಾಮಾನುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯಾದ ಹೂರಾಮನು ಹೊಳೆಯುವ ತಾಮ್ರದಿಂದ ಕರ್ತನ ಆಲಯಕ್ಕೋಸ್ಕರ ಮಾಡಿದನು.
2 ಪೂರ್ವಕಾಲವೃತ್ತಾ 4 : 17 (KNV)
ಯೊರ್ದನಿನ ತಗ್ಗಿ ನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ನಡುವೆ ಇರುವ ಜೇಡಿಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯಿಸಿದನು.
2 ಪೂರ್ವಕಾಲವೃತ್ತಾ 4 : 18 (KNV)
ಹೀಗೆ ಸೊಲೊಮೋನನು ಈ ಸಾಮಾನುಗಳನ್ನೆಲ್ಲಾ ಬಹಳವಾಗಿ ಮಾಡಿಸಿದನು.ಆ ತಾಮ್ರದ ತೂಕ ತಿಳಿಯಕೂಡದಷ್ಟಾಗಿತ್ತು.
2 ಪೂರ್ವಕಾಲವೃತ್ತಾ 4 : 19 (KNV)
ಹೀಗೆಯೇ ಸೊಲೊಮೋನನು ಕರ್ತನ ಆಲಯದ ಎಲ್ಲಾ ಸಾಮಾನುಗಳನ್ನೂ ಬಂಗಾರದ ಧೂಪಪೀಠ ವನ್ನೂ ಸಮ್ಮುಖದ ರೊಟ್ಟಿಗಳನ್ನು ಇಡುವ ಮೇಜು ಗಳನ್ನೂ
2 ಪೂರ್ವಕಾಲವೃತ್ತಾ 4 : 20 (KNV)
ಶುದ್ಧ ಬಂಗಾರವಾದ ದೈವೋಕ್ತಿಯ ಸ್ಥಾನದ ಮುಂದೆ ನ್ಯಾಯದ ಪ್ರಕಾರ ಹತ್ತಿರದ ದೀಪ ಸ್ತಂಭಗಳನ್ನೂ
2 ಪೂರ್ವಕಾಲವೃತ್ತಾ 4 : 21 (KNV)
ಅವುಗಳ ದೀಪಗಳನ್ನೂ ಹೂವು ಗಳನ್ನೂ ದೀಪಗಳ ಚಿಮಟೆಗಳನ್ನೂ ಬಂಗಾರದಿಂದ ಅಂದರೆ ನಿರ್ಮಲವಾದ ಬಂಗಾರದಿಂದ ಮಾಡಿಸಿ ದನು; ಕತ್ತರಿಗಳನ್ನೂ ಬೋಗುಣಿಗಳನ್ನೂ ಸೌಟು ಗಳನ್ನೂ ಅಗ್ನಿಪಾತ್ರೆಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.
2 ಪೂರ್ವಕಾಲವೃತ್ತಾ 4 : 22 (KNV)
ಇದಲ್ಲದೆ ಆಲಯ ಪ್ರವೇಶದ ಸ್ಥಳವೂ ಅತಿಪರಿಶುದ್ಧ ಸ್ಥಾನಕ್ಕೋಸ್ಕರವಾಗಿರುವ ಅದರ ಅಂತರಂಗದ ಬಾಗಲುಗಳೂ ಮಂದಿರದ ಮನೇ ಬಾಗಲುಗಳೂ ಬಂಗಾರದವುಗಳಾಗಿದ್ದವು.
❮
❯